ಜಿಲ್ಲೆಯ ಸುದ್ದಿಹಾವೇರಿ

ಹಾವೇರಿ ನಗರದಲ್ಲಿ ಗಣೇಶ ವಂದನ

· Updated · News Haveri

ಹಾವೇರಿ ನಗರದಲ್ಲಿ ಗಣೇಶ ವಂದನ ಇದೇ ಮೊದಲ ಬಾರಿಗೆ ಹಾವೇರಿ ನಗರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ವತಿಯಿಂದ ಗಣೇಶ ವಂದನ ಜರುಗಿತು. ಪುರದ ಓಣಿಯ ಗಜಾನನೋತ್ಸವ ಮಂಡಳಿ ಪ್ರತಿಷ್ಠಾಪಿಸಿದ್ದ ರಾ.ಸ್ವ.ಸಂಘದ ಮಾದರಿ ಗಣೇಶನಿಗೆ ಪ್ರಥಮ ಗಣೇಶ ವಂದನೆ ಸಲ್ಲಿಸಲಾಯಿತು. ಡ್ರಮ್ ಸೆಟ್, ಆನಕ, ಶಂಖ, ಕೊಳಲು, ತಾಳ, ತ್ರಿಭುಜ ಸೇರಿದಂತೆ ವಿವಿಧ ವಾದ್ಯಗಳನ್ನು ಸುಶ್ರಾವ್ಯವಾಗಿ ನುಡಿಸುವ ಮೂಲಕ ಸ್ವಯಂಸೇವಕರು ಜನಮನ ಗೆದ್ದರು. ಗಣೇಶ ವಂದನ ಆರಂಭವಾಗುತ್ತಿದ್ದಂತೆ ಸ್ವಯಂಸೇವಕ ಮೇಲೆ ಹೂಮಳೆ ಸುರಿಸಿ ಪ್ರೋತ್ಸಾಹಿಸಿದರು. ಅಲ್ಲಲ್ಲಿ ಮಹಿಳೆಯರು, ಮಕ್ಕಳು, ಯುವ ಸಮೂಹ ಗುಂಪು ಗುಂಪಾಗಿ ಪಾಲ್ಗೊಂಡು ಸ್ವಯಂಸೇವಕರನ್ನು ಹುರಿದುಂಬಿಸಿದರು. ಅಲ್ಲಿಂದ ಯಾಲಕ್ಕಿ ಓಣಿಯ ಹಾವೇರಿ ಕಾ ಮಹಾರಾಜ, ಗದಿಗ್ಗೇರ ಓಣಿಯ ಸಾಮ್ರಾಟ, ಗೌಳಿ ಗಲ್ಲಿ ಕಾ ಮಹಾರಾಜ ನಂತರ ವೈದ್ಯ ಸರ್ಕಲ್ ನ ಎಂ.ಜಿ. ರೋಡ ಕಾ ಮಹಾರಾಜ ಗಣೇಶ ಮೂರ್ತಿಗೆ ಗಣೇಶ ವಂದನೆ, ನಂತರ ಆರ್.ಎಸ್.ಎಸ್. ಪ್ರಾರ್ಥನೆ ಸಲ್ಲಿಸಿದರು. ಅಲ್ಲಲ್ಲಿ ಸಾರ್ವಜನಿಕರು ಭಕ್ತರಿಗಾಗಿ ವಿಭಿನ್ನ ಪ್ರಸಾದ ವ್ಯವಸ್ಥೆ ಮಾಡಿದ್ದು ಗಮನ ಸೆಳೆಯಿತು.