ಪಶ್ಚಿಮ ಪದವೀಧರರ ಕ್ಷೇತ್ರ : ಬಿಜೆಪಿಯ ಎಸ್.ವಿ. ಸಂಕನೂರ ಪುನರಾಯ್ಕೆ
9
ಜಿಲ್ಲೆಯ ಸುದ್ದಿ

ಪಶ್ಚಿಮ ಪದವೀಧರರ ಕ್ಷೇತ್ರ : ಬಿಜೆಪಿಯ ಎಸ್.ವಿ. ಸಂಕನೂರ ಪುನರಾಯ್ಕೆ

27 ದಿನಗಳ ಹಿಂದೆ
ಕರ್ನಾಟಕ ವಿಧಾನ ಪರಿಷತ್ತಿನ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆ ಮತ ಎಣಿಕೆ ಧಾರವಾಡ ಕೃಷಿ ವಿವಿ ಆವರಣದಲ್ಲಿ ತಡರಾತ್ರಿ ಪೂರ್ಣಗೊಂಡಿದ್ದು, ನಿರೀಕ್ಷೆಯಂತೆ ಎಸ್.ವಿ. ಸಂಕನೂರ ಮೂರನೇ ಬಾರಿಗೆ ವಿಧಾನ ಪರಿಷತ್ ಸದಸ್ಯರಾಗಿ ಪುನರಾಯ್ಕೆಯಾಗಿದ್ದಾರೆ. ಮೊದಲ ಸುತ್ತಿನ ಒಟ್ಟು 14001 ಮತಗಳ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಎಸ್.ವಿ. ಸಂಕನೂರ 6459 ಮತಗಳು ಹಾಗೂ ಕಾಂಗ್ರೆಸ್ ಅಭ್ಯರ್ಥಿ ಮೋಹನ್ ಲಿಂಬಿಕಾಯಿ 4394 ಮತಗಳನ್ನು ಪಡೆದುಕೊಂಡಿದ್ದರು. ಎರಡನೇ ಸುತ್ತಿನ 14000 ಮತಗಳಲ್ಲಿ ಬಿಜೆಪಿಯ ಎಸ್.ವಿ. ಸಂಕನೂರ 6161 ಮತಗಳು ಹಾಗೂ ಕಾಂಗ್ರೆಸ್ ನ ಮೋಹನ್ ಲಿಂಬಿಕಾಯಿ 4697 ಮತಗಳನ್ನು ಪಡೆದುಕೊಂಡರು. ಒಟ್ಟು 28001 ಮತಗಳಲ್ಲಿ ಸಂಕನೂರ 12,620 ಮತಗಳನ್ನು ಮತ್ತು ಮೋಹನ್ ಲಿಂಬಿಕಾಯಿ 9091 ಮತಗಳನ್ನು ಪಡೆದುಕೊಂಡಿದ್ದರು. ಎಸ್. ವಿ. ಸಂಕನೂರ 3529 ಮತಗಳ ಮುನ್ನಡೆ ಸಾಧಿಸಿದ್ದರು. ಮೂರನೇ ಸುತ್ತಿನಲ್ಲಿ ಒಟ್ಟು 14000 ಮತಗಳಲ್ಲಿ ಬಿಜೆಪಿ ಅಭ್ಯರ್ಥಿ ಸಂಕನೂರ 6191 ಮತ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಮೋಹನ್ ಲಿಂಬಿಕಾಯಿ 4795 ಮತಗಳನ್ನು ಪಡೆದಿದ್ದು, ಮೂರು ಸುತ್ತುಗಳಲ್ಲಿ ಎಣಿಕೆಯಾದ ಒಟ್ಟು 42001 ಮತಗಳಲ್ಲಿ ಸಂಕನೂರ 18,811 ಮತಗಳನ್ನು ಮತ್ತು ಮೋಹನ್ ಲಿಂಬಿಕಾಯಿ 13886 ಮತಗಳನ್ನು ಪಡೆದುಕೊಂಡಿದ್ದು, ಎಸ್. ವಿ. ಸಂಕನೂರ 4925 ಮತಗಳ ಮುನ್ನಡೆ ಕಾಯ್ದುಕೊಂಡಿದ್ದರು. ನಾಲ್ಕನೇಯ ಸುತ್ತಿನಲ್ಲಿ ಒಟ್ಟು 14000 ಮತಗಳಲ್ಲಿ ಬಿಜೆಪಿಯ ಎಸ್. ವಿ. ಸಂಕನೂರ 6527 ಮತಗಳು ಹಾಗೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮೋಹನ್ ಲಿಂಬಿಕಾಯಿ ಅವರು 4714 ಮತಗಳನ್ನು ಪಡೆದುಕೊಂಡು, ಒಟ್ಟು ನಾಲ್ಕು ಸುತ್ತುಗಳಲ್ಲಿ 56001 ಮತಗಳಲ್ಲಿ ಸಂಕನೂರ 25,338 ಮತಗಳನ್ನು ಮತ್ತು ಮೋಹನ್ ಲಿಂಬಿಕಾಯಿ 18600 ಮತಗಳನ್ನು ಪಡೆದುಕೊಂಡಿದ್ದರು. ಎಸ್. ವಿ. ಸಂಕನೂರ 6738 ಮತಗಳ ಮುನ್ನಡೆ ಕಾಯ್ದುಕೊಂಡಿದ್ದರು. ಐದನೇಯ ಸುತ್ತಿನಲ್ಲಿ ಒಟ್ಟು 14000 ಮತಗಳಲ್ಲಿ ಬಿಜೆಪಿಯ ಎಸ್. ವಿ. ಸಂಕನೂರ 6582 ಮತಗಳು ಹಾಗೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮೋಹನ್ ಲಿಂಬಿಕಾಯಿ 4600 ಮತಗಳನ್ನು ಪಡೆದುಕೊಂಡು, ಒಟ್ಟು ಐದು ಸುತ್ತುಗಳಲ್ಲಿ 70,001 ಮತಗಳಲ್ಲಿ ಸಂಕನೂರ 31920 ಮತಗಳನ್ನು ಮತ್ತು ಮೋಹನ್ ಲಿಂಬಿಕಾಯಿ 23200 ಮತಗಳನ್ನು ಪಡೆದುಕೊಂಡಿದ್ದರು. ಬಿಜೆಪಿಯ ಎಸ್. ವಿ. ಸಂಕನೂರ 8720 ಮತಗಳ ನಿರಂತರ ಮುನ್ನಡೆ ಕಾಯ್ದುಕೊಂಡು ಮುನ್ನುಗ್ಗಿದರು. ಅಂತಿಮವಾಗಿ ಆರನೇ ಸುತ್ತಿನಲ್ಲಿ ಒಟ್ಟು 3690 ಮತಗಳಲ್ಲಿ ಬಿಜೆಪಿಯ ಎಸ್. ವಿ. ಸಂಕನೂರ 1791 ಮತಗಳು ಹಾಗೂ ಕಾಂಗ್ರೆಸ್ ನ ಮೋಹನ್ ಲಿಂಬಿಕಾಯಿ 1188 ಮತಗಳನ್ನು ಪಡೆದುಕೊಂಡು, ಒಟ್ಟು ಆರು ಸುತ್ತುಗಳಲ್ಲಿ ಎಣಿಕೆಯಾದ ಒಟ್ಟು 73691 ಮತಗಳಲ್ಲಿ ಎಸ್.ವಿ. ಸಂಕನೂರ ಅವರು 33,711 ಮತಗಳನ್ನು ಮತ್ತು ಮೋಹನ್ ಲಿಂಬಿಕಾಯಿ ಅವರು 24,388 ಮತಗಳನ್ನು ಪಡೆದುಕೊಂಡರು. ಎಸ್. ವಿ. ಸಂಕನೂರು 9323 ಮತಗಳಿಂದ ಗೆಲುವಿನ ನಗೆ ಬೀರಿದರು. ಒಟ್ಟಾರೆ ಈ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ 10,245 ಮತಗಳು ತಿರಸ್ಕೃತವಾಗಿವೆ.