Latest Haveri news from Haveri taluk, Haveri district. ಹಾವೇರಿ

ಸ್ವಚ್ಛತೆ ನಿತ್ಯ ಬದುಕಿನ ಭಾಗವಾಗಲಿ : ನ್ಯಾ.ಬಿರಾದಾರ ದೇವಿಂದ್ರಪ್ಪ
ಸ್ವಚ್ಛತೆ ಇದ್ದಲ್ಲಿ ನಮ್ಮ ಮನೆ, ಮನಸ್ಸು ಸಹ ಸ್ವಚ್ಛವಾಗಿರುತ್ತದೆ. ಪ್ರತಿಯೊಬ್ಬರೂ ಮೊದಲು ತಮ್ಮ ಮನೆ, ಕಚೇರಿ ಹಾಗೂ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡಲ್ಲಿ ದೇಶವನ್ನು ಸ್ವಚ್ಛವಾಗಿಡಲು ಸಾಧ್ಯವಿದೆ.

ಸ್ವಚ್ಛತೆಗಾಗಿ ಶ್ರಮದಾನ
ಜಿಲ್ಲಾ ಪಂಚಾಯಿತಿ ಕಾರ್ಯಾಲಯದ ಆವರಣದಲ್ಲಿ ಸ್ವಚ್ಛತೆಗಾಗಿ ಶ್ರಮದಾನದ ಮೂಲಕ ಜಿಪಂ ಕಚೇರಿ ಸುತ್ತಮುತ್ತ ಸ್ವಚ್ಛತಾ ಕಾರ್ಯಕ್ರಮವನ್ನು ನಡೆಸಲಾಯಿತು. ಈ ವೇಳೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದಲ್ಜೀತ್‌ಕುಮಾರ್ ಪಾಲ್ಗೊಂಡು ಶ್ರಮದಾನ ಮಾಡಿದರು.

ವೈದ್ಯಕೀಯ ಕ್ಷೇತ್ರದಲ್ಲಿ ಫಾರ್ಮಾಸಿಸ್ಟಗಳ ಪಾತ್ರ ಮಹತ್ವದ್ದು: ಡಾ. ಸರಿತಾ
ಕೆಲಸದ ಒತ್ತಡದ ನಡುವೆ ಆರೋಗ್ಯಯುತ ಸಮಾಜ ನಿರ್ಮಾಣ ಮಾಡುವಲ್ಲಿ ಫಾರ್ಮಸಿ ಅಧಿಕಾರಿಗಳ ಪಾತ್ರ ಬಹುಳ ದೊಡ್ಡದು. ತಾಳ್ಮೆ ಹಾಗೂ ಜನರ ನಡುವಿನ ಉತ್ತಮ ಸಂವಹನ ವೃತ್ತಿ ಬದುಕು ಸರಾಗವಾಗಿ ಸಾಗಿಸಲು ಸಹಕಾರಿಯಾಗಿದೆ.
ಹಾವೇರಿ ನಗರದಲ್ಲಿ ಗಣೇಶ ವಂದನ
ಹಾವೇರಿ ನಗರದಲ್ಲಿ ಇದೇ ಮೊದಲ ಬಾರಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ವತಿಯಿಂದ ಗಣೇಶ ವಂದನ ನಡೆಯಿತು. ವಿವಿಧ ವಾದ್ಯಗಳೊಂದಿಗೆ ಸ್ವಯಂಸೇವಕರು ಗಣೇಶ ಮೂರ್ತಿಗಳಿಗೆ ವಂದನೆ ಸಲ್ಲಿಸಿದರು. ಮಹಿಳೆಯರು, ಮಕ್ಕಳು ಹಾಗೂ ಯುವಕರು ಉತ್ಸಾಹದಿಂದ ಭಾಗವಹಿಸಿ ಪ್ರೋತ್ಸಾಹಿಸಿದರು. ವಿವಿಧ ಗಣೇಶ ಮಂಡಳಿಗಳಲ್ಲಿ ವಂದನೆ ಮತ್ತು ಆರ್‌ಎಸ್‌ಎಸ್ ಪ್ರಾರ್ಥನೆ ನಡೆಯಿತು. ಸಾರ್ವಜನಿಕರು ಭಕ್ತರಿಗೆ ಪ್ರಸಾದ ವ್ಯವಸ್ಥೆಯನ್ನೂ ಮಾಡಿದ್ದರು

ರಾಜ್ಯ ಸಾರಿಗೆ ಸಂಸ್ಥೆಯ ಬಸ್–ಟ್ರಕ್ ಮುಖಾಮುಖಿ ಡಿಕ್ಕಿ: ಓರ್ವ ಸಾವು, 11 ಮಂದಿಗೆ ಗಾಯ
ಹಾವೇರಿ–ನೆಗಳೂರು ಮಾರ್ಗದಲ್ಲಿ ರಾಜ್ಯ ಸಾರಿಗೆ ಸಂಸ್ಥೆಯ ಬಸ್ ಹಾಗೂ ಟ್ರಕ್ ಮುಖಾಮುಖಿ ಡಿಕ್ಕಿಯಾಗಿ 55 ವರ್ಷದ ಶಂಕರಯ್ಯ ಮಠದ್ ಸ್ಥಳದಲ್ಲೇ ಮೃತಪಟ್ಟಿದ್ದು, 11 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಹಾವೇರಿ, ಗುತ್ತಲ, ಹೊಸರಿತ್ತಿ ಹಾಗೂ ಹುಬ್ಬಳ್ಳಿಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.