ಜಿಲ್ಲೆಯ ಸುದ್ದಿರಾಜಕೀಯ
ಹಾವೇರಿ ಜಿಪಂ, ತಾಪಂ ಮೀಸಲಾತಿ ಪ್ರಕಟ
· News Haveri
ಹಾವೇರಿ : ಉತ್ತರ ಕರ್ನಾಟಕದ ಹೆಬ್ಬಾಗಿಲು ಹಾವೇರಿ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿಗಳ ವರ್ಗವಾರು ಮೀಸಲಾತಿ ಬುಧವಾರ ಪ್ರಕಟವಾಗಿದೆ.
ಜಿಲ್ಲೆಯ ಒಟ್ಟು 34 ಜಿಪಂ ಹಾಗೂ 8 ತಾಲೂಕು ಪಂಚಾಯಿತಿಗಳಲ್ಲಿ ಇರುವ 122 ತಾಲೂಕ ಪಂಚಾಯಿತಿ ಸ್ಥಾನಗಳಿಗೆ ಮೀಸಲಾತಿ ನಿಗದಿಯಾಗಿದ್ದು, ಜಿ.ಪಂ., ತಾ.ಪಂ. ಸೇರಿ ಒಟ್ಟು 156 ಸ್ಥಾನಗಳ ಪೈಕಿ 80ಸ್ಥಾನಗಳು ಮಹಿಳೆಯರ ಪಾಲಾಗಿವೆ.
ಜಿಲ್ಲಾ ಪಂಚಾಯಿತಿ ಮೀಸಲಾತಿಯಂತೆ, ಒಟ್ಟು 34 ಸ್ಥಾನಗಳ ಪೈಕಿ ಎಸ್ಸಿ 5 (3 ಮಹಿಳೆ), ಎಸ್ಟಿ 3 (2 ಮಹಿಳೆ), ಹಿಂದುಳಿದ ವರ್ಗ ‘ಅ’7 (4 ಮಹಿಳೆ), ಹಿಂದುಳಿದ ವರ್ಗ ‘ಬ’ 2 (1 ಮಹಿಳೆ) ಹಾಗೂ ಸಾಮಾನ್ಯ ವರ್ಗಕ್ಕೆ 17 (7 ಮಹಿಳೆ) ಸ್ಥಾನಗಳು ಮೀಸಲಾಗಿವೆ. ಇದರೊಂದಿಗೆ ಜಿಪಂನ 37 ಸ್ಥಾನಗಳ ಪೈಕಿ 17 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿವೆ.
ಇನ್ನು ಜಿಲ್ಲೆಯ 8 ತಾಪಂಗಳ ಒಟ್ಟು 122 ಸದಸ್ಯ ಸ್ಥಾನಗಳ ಪೈಕಿ ಎಸ್ಸಿ 18 (11 ಮಹಿಳೆ), ಎಸ್ಟಿ 12 (8 ಮಹಿಳೆ), ಹಿಂದುಳಿದ ವರ್ಗ ‘ಅ’ 23 (12 ಮಹಿಳೆ), ಹಿಂದುಳಿದ ವರ್ಗ ‘ಬ’6 (5 ಮಹಿಳೆ) ಹಾಗೂ ಸಾಮಾನ್ಯ ವರ್ಗಕ್ಕೆ 63 (27 ಮಹಿಳೆ) ಸ್ಥಾನಗಳು ನಿಗದಿಯಾಗಿವೆ.
ರಾಣೇಬೆನ್ನೂರು 23 ಸ್ಥಾನ, ಹಾವೇರಿ 20, ಹಾನಗಲ್ 20, ಶಿಗ್ಗಾಂವಿ 14, ಸವಣೂರು 13, ಬ್ಯಾಡಗಿ 12, ಹಿರೇಕೆರೂರು 11 ಹಾಗೂ ರಟ್ಟಿಹಳ್ಳಿ 9 ಸ್ಥಾನಗಳನ್ನು ಹೊಂದಿವೆ. ತಾಪಂನ 122 ಸ್ಥಾನಗಳ ಪೈಕಿ 63 ಸ್ಥಾನ ಮಹಿಳೆಯರಿಗೆ ಮೀಸಲಾಗಿವೆ.
ಒಟ್ಟಾರೆ ಶೇ.50ರಷ್ಟು ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿದ್ದು, ಇನ್ನಾದರೂ ಆಡಳಿತ ವೈಖರಿ ಬದಲಾದೀತೆ ? ಅಭಿವೃದ್ಧಿಗೆ ಒತ್ತು ಸಿಕ್ಕೀತೇ? ಎಂದು ಕಾದು ನೋಡಬೇಕಿದೆ.
