ಹಾವೇರಿ ಜಿಪಂ ಕ್ಷೇತ್ರಗಳ ಮೀಸಲಾತಿ ಪ್ರಕಟ
8
ಜಿಲ್ಲೆಯ ಸುದ್ದಿರಾಜಕೀಯ

ಹಾವೇರಿ ಜಿಪಂ ಕ್ಷೇತ್ರಗಳ ಮೀಸಲಾತಿ ಪ್ರಕಟ

· Updated · News Haveri

ಹಾವೇರಿ : ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ವರ್ಗವಾರು ಮೀಸಲಾತಿ ಪಟ್ಟಿ ಪ್ರಕಟವಾಗಿದ್ದು, ಜಿಲ್ಲೆಯ 34 ಜಿಪಂ ಕ್ಷೇತ್ರಗಳಿಗೆ ಮೀಸಲಾತಿ ನಿಗದಿಪಡಿಸಲಾಗಿದೆ. ಈ ಮೀಸಲಾತಿ ಪಟ್ಟಿಗೆ ಆಕ್ಷೇಪಣೆಗಳಿದ್ದಲ್ಲಿ ಅ.19ರೊಳಗೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಕ್ಷೇತ್ರವಾರು ಮೀಸಲಾತಿ ವಿವರ 1. ತಡಸ – ಸಾಮಾನ್ಯ 2. ದುಂಡಶಿ – ಅನುಸೂಚಿತ ಜಾತಿ 3. ಕುಂದೂರು – ಸಾಮಾನ್ಯ (ಮಹಿಳೆ) 4. ಹುಲಗೂರ – ಹಿಂದುಳಿದ ವರ್ಗ ‘ಅ’ (ಮಹಿಳೆ) 5. ಕಾಡದಗಿ – ಹಿಂದುಳಿದ ವರ್ಗ ‘ಅ’ (ಮಹಿಳೆ) 6. ಯಲಿವಿಗಿ – ಅನುಸೂಚಿತ ಜಾತಿ (ಮಹಿಳೆ) 7. ಹುರಳಿಕುಪ್ಪಿ – ಸಾಮಾನ್ಯ 8. ಹತ್ತಿಮತ್ತೂರ – ಸಾಮಾನ್ಯ 9. ದೇವಗಿರಿ – ಹಿಂದುಳಿದ ವರ್ಗ ‘ಅ’ (ಮಹಿಳೆ) 10. ಅಗಡಿ – ಅನುಸೂಚಿತ ಪಂಗಡ 11. ನೆಗಳೂರು – ಸಾಮಾನ್ಯ (ಮಹಿಳೆ) 12. ಹಾವನೂರ – ಸಾಮಾನ್ಯ 13. ಕಬ್ಬೂರು – ಸಾಮಾನ್ಯ 14. ಕಾಗಿನೆಲೆ – ಹಿಂದುಳಿದ ವರ್ಗ ‘ಅ’ 15. ಮೋಟೆಬೆನ್ನೂರ – ಸಾಮಾನ್ಯ (ಮಹಿಳೆ) 16. ಶಿಡೇನೂರ – ಸಾಮಾನ್ಯ (ಮಹಿಳೆ) 17. ಬಮ್ಮನಹಳ್ಳಿ – ಸಾಮಾನ್ಯ (ಮಹಿಳೆ) 18. ನರೇಗಲ್ಲ – ಹಿಂದುಳಿದ ವರ್ಗ ‘ಅ’ (ಮಹಿಳೆ) 19. ಆಡೂರ – ಅನುಸೂಚಿತ ಪಂಗಡ (ಮಹಿಳೆ) 20. ಅಕ್ಕಿಆಲೂರ – ಹಿಂದುಳಿದ ವರ್ಗ ‘ಬ’ 21. ಹಿರೂರು – ಅನುಸೂಚಿತ ಜಾತಿ (ಮಹಿಳೆ) 22. ತೀರ್ಥವಳ್ಳಿ – ಸಾಮಾನ್ಯ 23. ಹಂಸಬಾವಿ – ಸಾಮಾನ್ಯ (ಮಹಿಳೆ) 24. ಚಿಕ್ಕೇರೂರ – ಸಾಮಾನ್ಯ 25. ಕೋಡ – ಹಿಂದುಳಿದ ವರ್ಗ ‘ಬ’ (ಮಹಿಳೆ) 26. ಕಾಕೋಳ – ಅನುಸೂಚಿತ ಜಾತಿ 27. ಮೇಡ್ಲೇರಿ – ಅನುಸೂಚಿತ ಜಾತಿ (ಮಹಿಳೆ) 28. ಜೋಯಿಸರಹರಳಹಳ್ಳಿ – ಸಾಮಾನ್ಯ 29. ಹಲಗೇರಿ – ಅನುಸೂಚಿತ ಪಂಗಡ (ಮಹಿಳೆ) 30. ಕರೂರ – ಹಿಂದುಳಿದ ವರ್ಗ ‘ಅ’ 31. ತುಮ್ಮಿನಕಟ್ಟಿ – ಸಾಮಾನ್ಯ 32. ಕಡೂರು – ಸಾಮಾನ್ಯ (ಮಹಿಳೆ) 33. ಮಾಸನೂರು – ಹಿಂದುಳಿದ ವರ್ಗ ‘ಅ’ 34. ಚಿಕ್ಕಕಬ್ಬಾರ – ಸಾಮಾನ್ಯ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ ಹಾಗೂ ಸಂಬಂಧಿತ ನಿಯಮಗಳ ಅನ್ವಯ ಪ್ರಕಟಿಸಿರುವ ಮೀಸಲಾತಿ ಪಟ್ಟಿಗೆ ಆಕ್ಷೇಪಣೆಗಳಿದ್ದಲ್ಲಿ, ಅ.19ರಂದು ಸಂಜೆ 5 ಗಂಟೆಯೊಳಗೆ ಬೆಂಗಳೂರಿನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಂಬಂಧಿಸಿದ ಅಧಿಕಾರಿಗಳಿಗೆ ಲಿಖಿತವಾಗಿ ಸಲ್ಲಿಸಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.