ಜಿಲ್ಲೆಯ ಸುದ್ದಿ

ಚುನಾವಣಾ ವೀಕ್ಷಕರ ನೇಮಕ

· News Haveri

ಹಾವೇರಿ : ಕರ್ನಾಟಕ ವಿಧಾನ ಪರಿಷತ್ತಿನ ಪಶ್ಚಿಮ ಪದವೀಧರರ ಕ್ಷೇತ್ರದಿಂದ ನಡೆಯಲಿರುವ ದ್ವೈವಾರ್ಷಿಕ ಚುನಾವಣೆ-2026ಕ್ಕೆ ಸಂಬಂಧಿಸಿದಂತೆ ಐ ಎಸ್ ಎ ಅಧಿಕಾರ ಡಾ.ವಿಶಾಲ ಆರ್ ಅವರನ್ನು ಚುನಾವಣಾ ವೀಕ್ಷಕರನ್ನಾಗಿ ಭಾರತ ಚುನಾವಣಾ ಆಯೋಗವು ನೇಮಿಸಿದೆ ಎಂದು ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರು ಹಾಗೂ ಕರ್ನಾಟಕ ಪಶ್ಚಿಮ ಪಧವೀಧರರ ಮತಕ್ಷೇತ್ರದ ಚುನಾವಣಾಧಿಕಾರಿ ಕೆ.ಎಂ. ಜಾನಕಿ ಅವರು ತಿಳಿಸಿದ್ದಾರೆ. ಸಾರ್ವಜನಿಕರು ಈ ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ಅಹವಾಲನ್ನು ಸಲ್ಲಿಸುವುದಿದ್ದಲ್ಲಿ ವೀಕ್ಷಕರ e-mail: vishalravi@rediffmail.com & vishal.r@nic.in ರಲ್ಲಿ ಹಾಗೂ ಚುನಾವಣಾ ವೀಕ್ಷಕರ ಲೈಸನ್ ಅಧಿಕಾರಿ ಮಹಮ್ಮದ ಕೈಝರ್, ಪ್ರಧಾನ ವ್ಯವಸ್ಥಾಪಕರು, ಆಡಳಿತ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಕಾರ್ಪೋರೆಟ್ ಆಫೀಸ್, ಗೋಪನಕೊಪ್ಪ, ಹುಬ್ಬಳ್ಳಿ ಮೋಬೈಲ್ ನಂಬರ 9164055006 ಇವರ ಮೂಲಕ ಚುನಾವಣಾ ವೀಕ್ಷಕರನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿದ್ದಾರೆ.