ಜಿಲ್ಲೆಯ ಸುದ್ದಿಕೃಷಿ
ಜಿಲ್ಲೆಯ ಅಲ್ಲಲ್ಲಿ ಧಾರಾಕಾರ ಮಳೆ
· News Haveri
ಹಾವೇರಿ : ಮುಂಗಾರು ಪೂರ್ವ ಮತ್ತು ಮುಂಗಾರು ಮಳೆ ಕೈಕೊಟ್ಟು ಅನ್ನದಾತನ ಸ್ಥಿತಿ ಅತ್ತ ಧರಿ ಇತ್ತ ಪುಲಿ ಎಂಬಂತಾಗಿದೆ. ಇತ್ತ ಬದುಕಲೂ ಸಂಕಷ್ಟಪಡುವ, ಬೆಳೆ ಉಳಿಸಿಕೊಳ್ಳಲು ಸಂಕಟಪಡುವ ಸ್ಥಿತಿಗೆ ಸಿಲುಕಿದ್ದಾರೆ. ಇದೇ ಹೊತ್ತಲ್ಲಿ ಸೋಮವಾರ ಜಿಲ್ಲೆಯಾದ್ಯಂತ ಧಾರಾಕಾರ ಮಳೆ ಸುರಿದಿದ್ದು, ಆಶಾವಾದ ಮೂಡಿಸಿದೆ.
ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಉತ್ತಮ ಮಳೆಯಾಗಿದ್ದು, ಸವಣೂರು, ಶಿಗ್ಗಾವಿ, ಬಂಕಾಪುರ, ಹಾವೇರಿ ಭಾಗಗಳಲ್ಲಿ ಉತ್ತಮ ಮಳೆ ಸುರಿದಿದೆ. ರಟ್ಟಿಹಳ್ಳಿ, ಹಿರೇಕೆರೂರ ಮತ್ತು ಹಾನಗಲ್ಲ ತಾಲೂಕುಗಳ ಅಲ್ಲಲ್ಲಿ ಸಾಧಾರಣ ಮಳೆ ಸುರಿದರೆ, ಬ್ಯಾಡಗಿ ತಾಲೂಕಿನಲ್ಲೂ ಸ್ವಲ್ಪ ಮಳೆ ಸುರಿದಿದೆ. ಸವಣೂರು, ಶಿಗ್ಗಾವಿ ಹಾಗೂ ಬಂಕಾಪುರದಲ್ಲಿ ಗುಡುಗು- ಸಿಡಿಲಿನ ಆರ್ಭಟದ ಮಳೆಗೆ ರಸ್ತೆಗಳು, ಚರಂಡಿಗಳು ತುಂಬಿ ಹರಿದಿವೆ.
