ತಾಲ್ಲೂಕುವಾರು ಸುದ್ದಿಹಾನಗಲ್
ಬೈಕ್‌ನಿಂದ ಬಿದ್ದು ಚಿಕಿತ್ಸೆ ಫಲಿಸದೇ ಸಾವು
· News Haveri
ಹಾನಗಲ್ಲ : ತಿರುವಿನಲ್ಲಿ ವೇಗವಾಗಿ ಹೋಗುತ್ತಿದ್ದ ಬೈಕ್ ನಿಯಂತ್ರಿಸಲಾಗದೇ ನೆಲಕ್ಕೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿಯೊಬ್ಬ ಚಿಕಿತ್ಸೆ ಫಲಿಸದೇ ಮೃತಪಟ್ಟ ಘಟನೆ ಘಟನೆ ಹಾನಗಲ್ ತಾಲೂಕು ಶಿರಗೋಡ ಗ್ರಾಮದಲ್ಲಿ ನಡೆದಿದೆ.
ಶಿರಗೋಡ ಗ್ರಾಮದ ಪ್ರಕಾಶ ದೇವೆಂದ್ರಪ್ಪ ಲಕ್ಕೋಳ್ಳಿ (55) ಮೃತ ಬೈಕ್ ಸವಾರ. ಈತ ಬೈಕಿನಲ್ಲಿ ಸಂತೆಹೊಸೂರ ಕಡೆಯಿಂದ ಶಿರಗೋಡ ಗ್ರಾಮಕ್ಕೆ ಹೋಗುವಾಗ ಸ್ಮಶಾನದ ಹತ್ತಿರ ಬೈಕ್ ನಿಯಂತ್ರಿಸಲಾಗದೆ ಕೆಳಗೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದನು. ಕೂಡಲೇ ಹಾನಗಲ್ ತಾಲೂಕು ಆಸ್ಪತ್ರೆಗೆ ದಾಖಲಿಸಿ, ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿ ಕಿಮ್ಸ್ ಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಕುರಿತು ಹಾನಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.